ಸಾಯಿರಾಂ ಸಿನಿಟಾಕೀಸ್ ಲಾಂಛನದಲ್ಲಿ ಜಿ ಶಿವಕುಮಾರ್ ನಿರ್ಮಾಣದ ಹಾಫ್ ಮೆಂಟಲ್ ಚಿತ್ರಕ್ಕೆ ಎನ್.ಆರ್. ಕಾಲೋನಿಯ ಬಸ್ ನಿಲ್ದಾಣದಲ್ಲಿ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಪದ್ಮಿನಿ ಪ್ರಕಾಶ್, ಸೋನು, ಸಂದೀಪ್ ಇತರರು ಅಭಿನಯಿಸಿದ ದೃಶ್ಯಗಳ ಚಿತ್ರೀಕರಣವಾಯಿತು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಲಕ್ಷ್ಮೀ ದಿನೇಶ್, ಛಾಯಾಗ್ರಹಣ - ಪಿ.ಎಲ್.ರವಿ, ಸಂಗೀತ - ಬಿ.ಜೆ ಭರತ್, ಸಂಕಲನ - ಸಚಿನ್, ಸಾಹಸ - ಮಾಸ್ ಮಾದ, ನೃತ್ಯ- ಹೈಟ್ ಮಂಜ, ಮುರುಳಿ, ಸಹನಿರ್ದೇಶನ - ಕುಮಾರ್ ತಾವರೆಕೆರೆ, ಕಲೆ-ಪ್ರಭು, ನಿರ್ವಹಣೆ-ಸೋಮಶೇಖರ್ - ಸುಧೀಂದ್ರ ಹೊಸಹಳ್ಳಿ, ತಾರಾಗಣದಲ್ಲಿ ಸಂದೀಪ್, ಸೋನು, ಮೈಕೋ ನಾಗರಾಜ್, ಲಕ್ಷ್ಮೀದೇವಮ್ಮ, ತಬಲ ನಾಣಿ, ಶ್ರೀನಿವಾಸ್ ಗೌಡ, ಮೋಹನ್ ಜುನೇಜಾ, ಉಂಡಾಡಿ ಗುಂಡ ಹರಿ, ಮುಂತಾದವರಿದ್ದಾರೆ.